ಮಂಡ್ಯ ಸಕ್ಕರೆ ಕಾರ್ಖಾನೆ
ಮಂಡ್ಯನಗರದಲ್ಲಿರುವ ಮೈಸೂರು ಸಕ್ಕರೆ
ಕಾರ್ಖಾನೆ ಏಷ್ಯಾದಲ್ಲಿಯೇ ಅತಿ ದೊಡ್ಡ ಕಾರ್ಖಾನೆ. ಅನೇಕ ಏರಿಳಿತಗಳನ್ನು ಕಂಡು ಇದೀಗ
ಚೇತರಿಸಿಕೊಳ್ಳುತ್ತಿದೆ. ಈ ಕಾರ್ಖಾನೆಯ ನಿರ್ಮಾಣಕ್ಕೆ ಕಾರಣರಾದವರು ನಾಲ್ವಡಿಯವರು, ಮಿರ್ಜಾ
ಇಸ್ಮಾಯಿಲ್ ಹಾಗೂ ಕೆನಾಡಾದ ವೆಸ್ಲಿ .ಸಿ ಕೋಲ್ಮನ್ ಎಂಬ ವ್ಯವಸಾಯ ತಜ್ಞ. ಮಂಡ್ಯ ಜಿಲ್ಲೆಯ
ಜೀವನಾಡಿ, ಆರ್ಥಿಕ ಸಂಪನ್ಮೂಲದ ಕಣಜ ಎಂದೇ ಖ್ಯಾತಿ ಪಡೆದಿದ್ದ ನಮ್ಮ ಈ ಕಾರ್ಖಾನೆ ಸ್ವಲ್ಪಸೊರಗಿ,
ಇದೀಗ ಚೇತರಿಕೊಳ್ಳುತ್ತಿದೆ


No comments:
Post a Comment